Home ಪ್ರಮುಖ ಸುದ್ದಿ ಕಡಬ ಪಟ್ಟಣ:ಮಾಸ್ಕ್ ಧರಿಸದೆ ಪೊಲೀಸ್ ಸಿಬ್ಬಂದಿಯ ದುರ್ವರ್ತನೆ

ಕಡಬ ಪಟ್ಟಣ:ಮಾಸ್ಕ್ ಧರಿಸದೆ ಪೊಲೀಸ್ ಸಿಬ್ಬಂದಿಯ ದುರ್ವರ್ತನೆ

1
0

ಕಡಬ ಟೈಮ್ಸ್, ಕಡಬ ಪಟ್ಟಣ ಸುದ್ದಿ: ಕೊರೋನಾ ಅಟ್ಟಹಾಸದ ನಡುವೆ ಪೊಲೀಸ್ ಸಿಬ್ಬಂದಿಯೋರ್ವರು ಮುಂಜಾಗೃತ ಕ್ರಮ ವಹಿಸದೆ ಸಾರ್ವಜಕವಾಗಿ ಬೆರೆತು ಟೀಕೆಗೆ ಒಳಗಾದ ಘಟನೆ ಮಂಗಳವಾರ ನಡೆದಿದೆ.

UNIC-KADABA

ಕಡಬ ಪೇಟೆಯ ಮುಖ್ಯ ರಸ್ತೆಯಲ್ಲಿ ಕಾರು ಮತ್ತು ಬೈಕ್ ನಡುವೇ ಅಪಘಾತ  ಸಂಭವಿಸಿದ್ದು ವಾಹನದಲ್ಲಿದ್ದವರು ಸಣ್ಣಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಈ ಘಟನಾ ಸ್ಥಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು, ಅಪಘಾತ ನಡೆದ ಸ್ಥಳಕ್ಕೆ ಕಡಬ ಪೋಲೀಸ್ ಠಾಣೆಯ ಸಿಬ್ಬಂದಿಗಳು ಆಗಮಿಸಿದ್ದು ಠಾಣಾ ಸಿಬ್ಬಂದಿ ಶಿವ ಪ್ರಸಾದ್ ಎಂಬವರು ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸದೇ   ಸರ್ಕಾರದ ನಿಯಮ ವನ್ನು ಗಾಳಿಗೆ ತೂರಿದ್ದಾರೆ. ಇದೀಗ ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ ಎಂದು ಸಾರ್ವಜನಿಕರು ಆಡಿಕೊಳ್ಳುವಂತಾಗಿದೆ.

GURUJI ADD

ಕೊರೋನಾ ಸೋಂಕು ಗ್ರಾಮೀಣ ಭಾಗಕ್ಕೂ ಆವರಿಸಿದ್ದು  ಈ ಸಂದರ್ಭದಲ್ಲಿ ಕಡಬ ಪೊಲೀಸ್ ಠಾಣಾಧಿಕಾರಿ ರುಕ್ಮ ನಾಯ್ಕ್ ಎಲ್ಲಾ ರೀತಿಯ ಮುನ್ನೆಚ್ಚರಿಕೆ ವಹಿಸುವ ಮೂಲಕ ಕಡಬ ಪ್ರದೇಶದಲ್ಲಿ ಕೊರೋನಾ ಹರಡದಂತೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುತ್ತಿದ್ದಾರೆ .ಮಾಸ್ಕ್ ಧರಿಸದವರಿಗೆ ದಂಡ ರೂಪದಲ್ಲಿ ಎಚ್ಚರಿಯನ್ನೂ ನೀಡಿದ್ದರು.ಆದರೆ ಕಡಬ ಠಾಣಾ ಸಿಬ್ಬಂದಿಯಿಂದಲೇ ಬೇಜಾವಾಬ್ದಾರಿ ವರ್ತನೆ ನಡೆದಿದೆ. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here