ಕಡಬ ಟೈಮ್ಸ್, ಪಟ್ಟಣ ಸುದ್ದಿ: ಕಡಬ ಗ್ರಾ.ಪಂ ಪಟ್ಟಣ ಪಂಚಾಯತ್ ಆಗಿ ಬದಲಾಗಿದೆ,ಇದರ ಬೆನ್ನಲ್ಲೇ ಆಡಳಿತದ ಅಧಿಕಾರ ಅವಧಿಯೂ ಮುಗಿದಿದೆ. ಇದರ ನಡುವೆ ಗ್ರಾ.ಪಂ ನ ಅಂಗಳದಿಂದ ಇಂಟರ್ ಲಾಕ್ ನ್ನು ಗ್ರಾ.ಪಂ ಸದಸ್ಯರೊಬ್ಬರು ಆಡಳಿತ ಮಂಡಳಿಯ ಅನುಮತಿ ಇಲ್ಲದೆ ಲೋಡು ಮಾಡಿ ಕೊಂಡು ಹೋಗಿ ಪೇಚಿಗೆ ಸಿಲುಕಿದ್ದರು. ಬಳಿಕ ಮತ್ತೆ ಪಂಚಾಯತ್ ಅಂಗಳಕ್ಕೆ ತಂದು ಹಾಕಿದ್ದಾರೆ.
ಈಗ ವಿಷಯ ಅದಲ್ಲ, ಇಂಟರ್ ಲಾಕನ್ನು ಕೊಂಡು ಹೋಗುವ ಭರದಲ್ಲಿ ಪಂಚಾಯತ್ ಆವರಣದಲ್ಲಿದ್ದ ಕಬ್ಬಿಣದ ಶೀಟು,ಕಂಬ ಮತ್ತು ಗೋಡೆಗೆ ಹಾನಿ ಮಾಡಿದ್ದರು. ಇದೀಗ ಐದು ದಿನ ಕಳೆದರೂ ಅದನ್ನು ಸರಿಪಡಿಸುವ ಗೋಜಿಗೆ ಹೋಗಿಲ್ಲ.
ಟೆಂಡರ್ ಕರೆಯದೆ ರಾಶಿ ಹಾಕಿದ್ದ ಇಂಟರ್ ಲಾಕ್ ನ್ನು ಕೊಂಡು ಹೋಗಿ ಸುದ್ದಿಯಾದ ಬಳಿಕ ಮತ್ತೆ ಅದೇ ಜಾಗದಲ್ಲಿ ತಂದು ಹಾಕಿ ಕೈತೊಳೆದುಕೊಂಡರು. ಈ ವೇಳೆ ಹಾನಿಗೊಂಡ ಗ್ರಾ.ಪಂ ಆಸ್ತಿಯನ್ನು ಸರಿಪಡಿಸುವುದಾಗಿ ಹೇಳಿರುವುದಾಗಿ ತಿಳಿದು ಬಂದಿದೆ. ಹಾನಿಗೊಂಡ ಆಸ್ತಿಯನ್ನು ಸರಿಪಡಿಸಲು ಪ್ರತ್ಯೇಕ ಬಿಲ್ ಪಾಸ್ ಮಾಡಬೇಕೆ?