Home ಪ್ರಮುಖ ಸುದ್ದಿ ಕಡಬ:ಕೊರೋನಾ ಭಾದಿತ ವ್ಯಕ್ತಿಯ ಜತೆಯಲ್ಲಿದ್ದ ಚಾಲಕ ನಾಪತ್ತೆ!

ಕಡಬ:ಕೊರೋನಾ ಭಾದಿತ ವ್ಯಕ್ತಿಯ ಜತೆಯಲ್ಲಿದ್ದ ಚಾಲಕ ನಾಪತ್ತೆ!

2
0

ಕಡಬ ಟೈಮ್ಸ್, ಪಟ್ಟಣ ಸುದ್ದಿ: ಕೊರೋನಾ ಭಾದಿತ ವ್ಯಕ್ತಿಯ ಮನೆ ಸೇರಿದಂತೆ ಸುತ್ತಮುತ್ತಲಿನ ಎಂಟು ಮನೆಗಳನ್ನು ಅಧಿಕಾರಿಗಳ ತಂಡ  ಆರಿಗ, ದೋಳ ಪ್ರದೇಶದ ಮನೆಗಳನ್ನು ಸೀಲ್ ಡೌನ್ ಮಾಡಿದ್ದಾರೆ.

UNIC-KADABA

ಈ ಮಧ್ಯೆ ಕೊರೋನಾ ಸೋಂಕಿತ  ವ್ಯಕ್ತಿಯನ್ನು ಆಸ್ಪತ್ರೆ ಗೆ ಕೊಂಡೊಯ್ದು ಅವರ ಜತೆಯಲ್ಲಿದ್ದ ಚಾಲಕರೋರ್ವರು ನಾಪತ್ತೆ ಯಾಗಿರುವುದು ಅಧಿಕಾರಿಗಳಿಗೆ ತಲೆನೋವಾಗಿದೆ.ಚಾಲಕನನ್ನು ಅಧಿಕಾರಿಗಳು ಹುಡುಕಾಡುತ್ತಿದ್ದಾರೆ.

ಕೊರೋನಾ ಭಾದಿತ ವ್ಯಕ್ತಿಯ ಮಾವನ ಮನೆ ಹಾಗೂ ಸುತ್ತಲಿನ ಮನೆಯವರನ್ನು ಹೋಂ ಕ್ವಾರಂಟೈನ್ ನಲ್ಲಿರುವಂತೆ ಸೂಚಿಸಲಾಗಿದೆ. ಕಡಬ ಸಿಎ ಬ್ಯಾಂಕಿನ ಸಿಸಿ ಟಿವಿ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ. ಕೊರೋನಾ ಭಾದಿತ ವ್ಯಕ್ತಿ ಎಲ್ಲೆಲ್ಲಿ ಸುತ್ತಾಡಿದ್ದಾರೆ ಎಂಬ ಮಾಹಿತಿ ಯನ್ನು ಅಧಿಕಾರಿಗಳು ಕಲೆ ಹಾಕುತ್ತಿದ್ದು  ಈಗಾಗಲೇ ಹೊಸಮಠ ಪೇಟೆಯ ಒಂದು ಅಂಗಡಿಗೆ ಭೇಟಿ ನೀಡಿದ್ದಾರೆಂಬ ಮಾಹಿತಿ ಮೇರೆಗೆ  ಅಲ್ಲಿಗೂ ಅಧಿಕಾರಿಗಳು ತೆರಳಿ ಸೂಕ್ತ ಮುಂಜಾಗೃತಾ ಕ್ರಮಗಳನ್ನು ಸೂಚಿಸಿದ್ದಾರೆ.

GURUJI ADD

ಈ ಸಂದರ್ಭದಲ್ಲಿ ಕೊರೋನಾ ಭಾದಿತ ವ್ಯಕ್ತಿಯ ಮನೆಗೆ ಸರ್ಕಲ್ ಇನ್ಸ್ ಪೆಕ್ಟರ್ ನಾಗೇಶ್ ಕದ್ರಿ, ಕಡಬ ಎಸ್.ಐ ರುಕ್ಮ ನಾಯ್ಕ್ ಕಡಬ ವೈದ್ಯಾಧಿಕಾರಿ ಡಾ. ಸುಚಿತ್ರಾ ರಾವ್, ಕಂದಾಯ ನಿರೀಕ್ಷಕ ಅವಿನ್ ರಂಗತ್ ಮಲೆ, ಗ್ರಾ.ಪಂ ಪಿಡಿಒ ಚೆನ್ನಪ್ಪ ಗೌಡ ಆರೋಗ್ಯ ಸಹಾಯಕಿಯರು, ಆಶಾ ಕಾರ್ಯಕರ್ತೆ, ಸಿಬ್ಬಂದಿಗಳು ಭೇಟಿ ನೀಡಿದ್ದಾರೆ.

LEAVE A REPLY

Please enter your comment!
Please enter your name here