ಕಡಬ ಟೈಮ್ಸ್, ಮರ್ದಾಳ: ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಸುಳ್ಯ ಕ್ಷೇತ್ರದ ಅಭಿವೃದ್ಧಿಗಾಗಿ ಹೆಚ್ಚಿನ ಅನುದಾನ ಬಿಡುಗಡೆಗೆ ಯತ್ನಿಸಲಾಗುತ್ತಿದೆ ಈಗಾಗಲೇ ಮುಖ್ಯ ಮಂತ್ರಿಯವರ ವಿಶೇಷ ಅನುದಾನದಲ್ಲಿ ಕ್ಷೇತ್ರದ ಹಲವೆಡೆ ರಸ್ತೆ, ಸೇತುವೆ ಮುಂತಾದ ಅಭಿವೃದ್ದಿ ಕಾಮಗಾರಿಗಳನ್ನು ನಡೆಸಲಾಗುತ್ತಿದೆ ಎಂದು ಸುಳ್ಯ ಶಾಸಕ ಎಸ್.ಅಂಗಾರ ಹೇಳಿದರು.
ಅವರುಫೆಬ್ರವರಿ ೧೦ ರಂದು ಐತ್ತೂರು ಗ್ರಾಮ ಪಂಚಾಯಿತಿವ್ಯಾಪ್ತಿಯ ಮರ್ದಾಳ-ಪೆರಿಯಶಾಂತಿ ರಾಜ್ಯಹೆದ್ದಾರಿಯಿಂದ ಕೋಡಂದೂರು ಅತ್ಯಡ್ಕ ಸುಳ್ಯ ಮುಖಾಂತರ ಕೊಣಾಜೆ-ಮರ್ದಾಳ ರಸ್ತೆಗೆ ಸಂಪರ್ಕ ಕಲ್ಪಪಿಸುವಕೋಡಂದೂರು ಅತ್ಯಡ್ಕ ಸುಳ್ಯ ರಸ್ತೆಯಲ್ಲಿ ಬೀರ್ಯಎಂಬಲ್ಲಿ ಸುಮಾರು ೨೦ ಲಕ್ಷರೂ ವೆಚ್ಚದಲ್ಲಿ ನಡೆಯಲಿರುವ ರಸ್ತೆ ಕಾಂಕ್ರೀಟಿಕರಣಕ್ಕೆ ಗುದ್ದಲಿಪೂಜೆನೆರೆವೇರಿಸಿ ಮಾತನಾಡಿದರು.
ಸುಳ್ಯವಿಧಾನಸಭಾ ಕ್ಷೇತ್ರದ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆಹೆಚ್ಚಿನ ಆಧ್ಯತೆ ನೀಡುತ್ತಿದ್ದು ಕಡಬತಾಲೂಕಿನಾದಂತ್ಯ ಗ್ರಾಮೀಣ ರಸ್ತೆಗಳ ಅಭಿವೃದ್ಧಿಯಾಗುತ್ತಿದೆ.ಇನ್ನಷ್ಟು ಅನುದಾನ ಬಿಡುಗಡೆಯಾಗುತ್ತಿದ್ದು, ಗ್ರಾಮೀಣ ಭಾಗದಹೆಚ್ಚಿನ ಎಲ್ಲಾ ರಸ್ತೆಗಳನ್ನು ಆದ್ಯತೆಯಮೇರೆಗೆ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಶಾಸಕರು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಕೃಷ್ಣ ಶೆಟ್ಟಿ ಕಡಬ, ಸಿ.ಪಿ.ಜೋನ್ ಕರಿಮಾಂಗಲ್. ತಾಲೂಕು ಪಂಚಾಯಿತಿ ಸದಸ್ಯೆ ಪಿ.ವೈ.ಕುಸುಮಾ, ಐತ್ತೂರು ಗ್ರಾ,ಪಂ ಅಧ್ಯಕ್ಷ ಸತೀಶ್ ಕೆ, ಐತ್ತೂರು ಗ್ರಾ.ಪಂ ಅಭಿವೃದ್ದಿ ಅಧಿಕಾರಿ ಶೇಖರ್ ಸೇರಿದಂತೆ ಬಿಜೆಪಿ ಮುಖಂಡರು,ಊರಿನ ಪ್ರಮುಖರು,ಗ್ರಾ.ಪಂ ಸದಸ್ಯರು ಉಪಸ್ಥಿತರಿದ್ದರು.