ಕಡಬ ಟೈಮ್ಸ್,ನೆಲ್ಯಾಡಿ: ಪುತ್ತೂರು ಪಿ.ಎಲ್.ಡಿ ಬ್ಯಾಂಕಿನ ನಿರ್ದೇಶಕರಾಗಿ ನೆಲ್ಯಾಡಿ ವಲಯದಿಂದ ಭಾಸ್ಕರ ಗೌಡ ಎಸ್ ಇಚ್ಲಂಪಾಡಿ ಅವಿರೋಧವಾಗಿ ಆಯ್ಕೆ ಆಗಿದ್ದಾರೆ.
ಪುತ್ತೂರು ಪಿ.ಎಲ್.ಡಿ ಬ್ಯಾಂಕಿನ ನಿರ್ದೇಶಕರಾಗಿ 3ನೇ ಬಾರಿಗೆ ಆಯ್ಕೆ ಆದ ಇವರು ಕಳೆದ ಪ್ರಥಮ ಅವಧಿಯಲ್ಲಿ ಬ್ಯಾಂಕಿನ ಕೋಶಾಧಿಕಾರಿಯಾಗಿ ,ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು. ಈ ಹಿಂದಿನ 5 ವರ್ಷಗಳಲ್ಲಿ ಬ್ಯಾಂಕಿನ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಈ ಬಾರಿ ಇವರಿಗೆ ಎದುರಾಳಿಗಳಿಲ್ಲದೆ ಅ ವಿರೋಧವಾಗಿ ಆಯ್ಕೆ ಆಗಿದ್ದು ಇವರ ಸಾಮಾಜಿಕ ಕಳಕಳಿಯ ಸೇವೆಯನ್ನು ಜನರು ಮೆಚ್ಚಿಕೊಂಡಿದ್ದಾರೆ.
ತಾ.ಪಂ.ಮಾಜಿ ಸದಸ್ಯರಾದ ಇವರು ಸಾಮಾಜಿಕ ಧಾರ್ಮಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದು ಭಾರತೀಯ ಜನತಾ ಪಾರ್ಟಿಯ ಇಚ್ಲಂಪಾಡಿ ಗ್ರಾಮ ಮಟ್ಟದಿಂದ ಕಾರ್ಯಕರ್ತರರಾಗಿ ದುಡಿದು ಜಿಲ್ಲಾ ನಾಯಕರಾಗಿ ಪಕ್ಷ ಸಂಘಟನೆಯಲ್ಲಿ ಸಕ್ರಿಯಾವಾಗಿ ತೊಡಗಿಸಿಕೊಂಡಿದ್ದಾರೆ. ಇವರು ಇಚ್ಲಂಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಾಸ್ಥಾನದ ಜೀರ್ಣೋದ್ದಾರಸಮಿತಿ ಹಾಗೂ ಬೂಡುಗುಡ್ಡೆ ದೈವಂಕುಲು ದೈವಸ್ಥಾನದ ಜೀರ್ಣೋದ್ದಾರ ಸಮಿತಿ ಗೌರವ ಅಧ್ಯಕ್ಷರಾಗಿಯೂ ಸೇವೆಸಲ್ಲಿಸಿರುತ್ತಾರೆ.