ಕಡಬ ಟೈಮ್ಸ್, ಕೋಡಿಂಬಾಳ: ಕೋಡಿಂಬಾಳದಲ್ಲಿ ಮಹಿಳೆಯೊಬ್ಬರ ಮೇಲೆ ನಡೆದ ಆ್ಯಸಿಡ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಮಾನವ ಹಕ್ಕು ಆಯೋಗಕ್ಕೆ ದೂರು ಸಲ್ಲಿಕೆಯಾಗಿದೆ.
ನೀತಿ ತಂಡದ ಸ್ಥಾಪಕ ಅಧ್ಯಕ್ಷ, ಆರ್.ಟಿ.ಐ ಕಾರ್ಯಕರ್ತ ಜಯನ್ ಟಿ ಎಂಬವರು ಜನವರಿ 27 ರಂದು ದೂರು ದಾಖಲಿಸಿದ್ದು, ಆ್ಯಸಿಡ್ ಎರಚಿದ ವ್ಯಕ್ತಿಯನ್ನು ಉನ್ನತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮ ಜರುಗಿಸುವುದಲ್ಲದೆ ಸಂತ್ರಸ್ತರಿಗೆ ಸೂಕ್ತ ಪರಿಹಾರ ಒದಗಿಸುವಂತೆ ದೂರಿನಲ್ಲಿ ತಿಳಿಸಿದ್ದಾರೆ.
ಕೋಡಿಂಬಾಳದ ಕೊಠಾರಿಯ ಸ್ವಪ್ನ ಮತ್ತು ಮಗುವಿನ ಮೇಲೆ ಆಕೆಯ ಬಾವ ಜಯಾನಂದ ಎಂಬಾತ ಜನವರಿ.23 ರಂದು ಆ್ಯಸಿಡ್ ಎರಚಿದ್ದ. ಆ್ಯಸಿಡ್ ದಾಳಿಯಿಂದಾಗಿ ಗಂಭೀರ ಗಾಯಗೊಂಡ ಮಹಿಳೆ ಮತ್ತು ಮಗುವನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
.