Home ಪ್ರಮುಖ ಸುದ್ದಿ ಕಲ್ಲುಗುಡ್ಡೆ: ಒರುಂಬಾಲು ರಸ್ತೆಗೆ ಶಾಸಕರಿಂದ ಗುದ್ದಲಿ ಪೂಜೆ

ಕಲ್ಲುಗುಡ್ಡೆ: ಒರುಂಬಾಲು ರಸ್ತೆಗೆ ಶಾಸಕರಿಂದ ಗುದ್ದಲಿ ಪೂಜೆ

ಕಡಬ ಟೈಮ್ಸ್, ನೂಜಿಬಾಳ್ತಿಲ: ತೀವ್ರ ಹದಗೆಟ್ಟಿದ್ದ ಬದಿಬಾಗಿಲು-ಒರುಂಬಾಲು ರಸ್ತೆಗೆ ಶಾಸಕರ 15 ಲಕ್ಷ ರೂ. ಅನುದಾನದಲ್ಲಿ ನಡೆಯಲಿರುವ ಕಾಂಕ್ರೀಟ್ ಕಾಮಗಾರಿಗೆ ಶುಕ್ರವಾರ ಸುಳ್ಯ ಶಾಸಕ ಎಸ್.ಅಂಗಾರ ಶಂಕುಸ್ಥಾಪನೆ ನೆರವೇರಿಸಿದರು.

UNIC-KADABA

ಹಿರಿಯರಾದ ದೇಜಪ್ಪ ಪೂಜಾರಿ ಅವರು ದೀಪ ಬೆಳಗಿಸಿ, ಉದ್ಘಾಟಿಸಿದರು.ಶಾಸಕ ಎಸ್.ಅಂಗಾರ ತೆಂಗಿನ ಕಾಯಿ ಒಡೆದು ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ಸುಮಾರು 25 ವರ್ಷಗಳ ಬಳಿಕ ನೂಜಿಬಾಳ್ತಿಲ ಗ್ರಾ.ಪಂ. ವ್ಯಾಪ್ತಿಯಲ್ಲಿ ಹೆಚ್ಚಿನ ಅಭಿವೃದ್ಧಿ ಕಾರ್ಯಗಳು ನಡೆದು ಬದಲಾವಣೆಗಳಾಗಿವೆ. ಈ ಭಾಗದ ವಿವಿಧ ರಸ್ತೆಗಳನ್ನು ವಿವಿಧ ಯೋಜನೆಗಳಡಿಯಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಸರಕಾರಕ್ಕೆ ಇಚ್ಛಾಶಕ್ತಿಯಿದ್ದಲ್ಲಿ ಅಭಿವೃದ್ಧಿ ಸಾಧ್ಯ. ಸರಕಾರ ಹಣ ನೀಡಿದ್ದಲ್ಲಿ ಮಾತ್ರ ಚುನಾಯಿತ ಪ್ರತಿನಿಧಿಗಳಿಂದ ಕೆಲಸ ನಡೆಸಲು ಸಾಧ್ಯವಾಗಲಿದೆ. ಅಭಿವೃದ್ಧಿ ಕೆಲಸಗಳು ನಡೆಯಲು ಗ್ರಾಮಸ್ಥರು ಸಹಕರಿಸಬೇಕು . ಈ ರಸ್ತೆಗೆ ಮುಂದಿನ ಹಂತದ ಅನುದಾನವನ್ನು ಫೆಬ್ರವರಿ ಬಳಿಕ ನೀಡುವ ಭರವಸೆ ನೀಡಿ, ಮುಂದೆ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಲ್ಲಿ ಸದ್ರಿ ರಸ್ತೆ ಅಭಿವೃದ್ಧಿಗೆ ಕ್ರಮಕೈಗೊಳ್ಳಲಾಗುವುದು ಎಂದರು.

GURUJI ADD

ಚರಂಡಿ ಬಂದ್ ಮಾಡಬೇಡಿ :
ಜನಪ್ರತಿನಿಧಿಗಳು ರಸ್ತೆಯನ್ನು ಸರಕಾರದ ಅನುದಾನದಿಂದ ಅಭಿವೃದ್ಧಿ ಪಡಿಸುತ್ತಾರೆ. ಸಾರ್ವಜನಿಕರು ಚರಂಡಿಗಳನ್ನು ಬಂದ್ ಮಾಡಿದಲ್ಲಿ, ಮಳೆ ನೀರು ರಸ್ತೆಯಲ್ಲಿ ಹರಿದು ರಸ್ತೆಗಳು ದುಸ್ತರಗೊಳ್ಳತ್ತವೆ. ಆದ್ದರಿಂದ ಚರಂಡಿಗಳನ್ನು ಬಂದ್ ಮಾಡದಂತೆ ಶಾಸಕರು ಕೇಳಿಕೊಂಡರು.:ಎಪಿಎಂಸಿ ಮಾಜಿ ಅಧ್ಯಕ್ಷ ಕೃಷ್ಣ ಶೆಟ್ಟಿ,ತಾ.ಪಂ. ಸದಸ್ಯೆ ಪಿ.ವೈ.ಕುಸುಮ, ಎಪಿಎಂಸಿ ನಿರ್ದೇಶಕರಾದ ಪುಲಸ್ತ್ಯಾ ರೈ , ಮೇದಪ್ಪ ಡೆಪ್ಪುಣಿ ಸೇರಿದಂತೆ ಪ್ರಮುಖರು, ಸ್ಥಳೀಯ ಗ್ರಾಮಸ್ಥರು ಉಪಸ್ಥಿತರಿದ್ದರು. ಶ್ರೀಧರ ಪೂಜಾರಿ ಕಂಪ ಸ್ವಾಗತಿಸಿದರು.

LEAVE A REPLY

Please enter your comment!
Please enter your name here