ಕಡಬ ಟೈಮ್ಸ್, ಕಲ್ಲುಗುಡ್ಡೆ: ಕಡ್ಯ ಕೊಣಾಜೆ ಗ್ರಾ.ಪಂ.ನಲ್ಲಿ ೨೦೨೦-೨೧ನೇ ಸಾಲಿನ ನಮ್ಮ ಗ್ರಾಮ ನಮ್ಮ ಯೋಜನೆ ವಿಶೇಷ ಗ್ರಾಮ ಸಭೆ ಬುಧವಾರ ಕಡ್ಯ ಕೊಣಾಜೆ ಶ್ರೀ ದುರ್ಗಾಂಬಿಕಾ ಭಜನಾ ಮಂದಿರದ ಸಭಾಭವನದಲ್ಲಿ ನಡೆಯಿತು.
ಗ್ರಾ.ಪಂ. ಅಧ್ಯಕ್ಷೆ ಬೇಬಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಯಶೋಧರ ಗೌಡ ಮಾತನಾಡಿ, ಸರಕಾರದ ಮಹತ್ವಾಕಾಂಕ್ಷೆ ಯೋಜನೆಗಳ ಸದುಪಯೋಗಗಳನ್ನು ಗ್ರಾಮಸ್ಥರು ಪಡೆದು ಅಭಿವೃದ್ಧಿಗೆ ಕೈಜೋಡಿಸಿ ಎಂದರು. ಗ್ರಾ.ಪಂ. ಸದಸ್ಯರಾದ ಪುಷ್ಪಾ ಕುಮಾರಿ, ಚಂದ್ರಾವತಿ, ಪೊಡಿಯಾ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಯೋಜನೆಯ ಕುರಿತಾಗಿ ಗ್ರಾಮದಲ್ಲಿ ಆಗಬೇಕಾದ ವಿವಿಧ ಇಲಾಖೆಗೊಳಪಟ್ಟ ಅಭಿವೃದ್ಧಿ ಕಾರ್ಯಗಳಿಗೆ ಸಾರ್ವಜನಿಕರಿಂದ ಅರ್ಜಿಯನ್ನು ಸ್ವೀಕರಿಸಲಾಯಿತು. ಅಧಿಕಾರಿಗಳಾದ ಮೆಸ್ಕಾಂನ ಅನ್ನಮ್ಮ, ಆರೋಗ್ಯ ಇಲಾಖೆಯ ಮರಿಯಮ್ಮ, ಕೊಣಾಜೆ ವಿ.ಎ. ಸಿದ್ದಲಿಂಗ ಜಂಗಮ ಶೆಟ್ಟಿ, ಕಡ್ಯ ಶಾಲಾ ಶಿಕ್ಷಕಿ ಸುಮ, ಆಶಾಕರ್ಯಕರ್ತೆ ಜಯಂತಿ ಸೇರಿದಂತೆ ಗ್ರಾಮಸ್ಥರು ಸಭೆಯಲ್ಲಿ ಪಾಲ್ಗೊಂಡಿದ್ದರು. ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಪದ್ಮನಾಭ ಗೌಡ ಸ್ವಾಗತಿಸಿ, ಸಿಬ್ಬಂದಿ ಸತೀಶ್ ವಂದಿಸಿದರು. ಸಿಬ್ಬಂದಿಗಳಾದ ಪುನೀತ್, ಮಲ್ಲಿಕಾ ಸಹಕರಿಸಿದರು.